Sunday 27 January 2013

ಎಲ್ಲವೂ ಟಿ. ಆರ್. ಪಿ. ಗಾಗಿ

ªÀiÁzsÀåªÀÄUÀ¼À dªÁ¨ÁÝj £É£À¦¸ÀĪÀªÀjUÉÆAzÀÄ ªÀiÁvÀÄ...
 http://www.kannadaprabha.com/columns/%E0%B2%AE%E0%B2%BE%E0%B2%A7%E0%B3%8D%E0%B2%AF%E0%B2%AE%E0%B2%97%E0%B2%B3-%E0%B2%9C%E0%B2%B5%E0%B2%BE%E0%B2%AC%E0%B3%8D%E0%B2%A6%E0%B2%BE%E0%B2%B0%E0%B2%BF-%E0%B2%A8%E0%B3%86%E0%B2%A8%E0%B2%AA%E0%B2%BF%E0%B2%B8%E0%B3%81%E0%B2%B5%E0%B2%B5%E0%B2%B0%E0%B2%BF%E0%B2%97%E0%B3%8A%E0%B2%82%E0%B2%A6%E0%B3%81-%E0%B2%AE%E0%B2%BE%E0%B2%A4%E0%B3%81/3365.html

ಈ ಲೇಖನವನ್ನು ನಮ್ಮ ಮಿತ್ರ ಅಜಿತ್ ಹನಮಕ್ಕನವರ್ ಕನ್ನಡ ಪ್ರಭದ ಅಂಕಣದಲ್ಲಿ  ಬರೆದಿದ್ದಾರೆ.
ಮಾಧ್ಯಮಗಳಲ್ಲಿ ಮುಖ್ಯವಾಗಿ ತಾವು ಕಾರ್ಯ ನಿರ್ವಹಿಸುತ್ತಿರುವ ದೃಶ್ಯ ಮಾಧ್ಯಮಗಳ  "ಹೊಟ್ಟೆ ಹಸಿವಿ"ನ ಬಗ್ಗೆ  ಬರೆದಿದ್ದಾರೆ. ನಮ್ಮಂತವರಿಗೆ ತಿಳಿಯದಿದ್ದ ಮಾಧ್ಯಮಗಳ ಅಂತರಂಗವನ್ನು ಮನಬಿಚ್ಚಿ ಬರೆದುಕೊಂಡಿದ್ದಾರೆ.

ಅಭಿನಂದನೆಗಳು.

ಅಷ್ಟೂ ಲೇಖನವನ್ನು ಓದಿದ ಮೇಲೆ ಅನ್ನಿಸಿದ್ದು  ಒಂದೇ "ಟಿ.ಆರ್.ಪಿ" ಯ ಬೆನ್ನೇರಿ ಓಡುತ್ತಿದ್ದಾರೆ.
ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವ  ಏಕೈಕ ಉದ್ದೇಶದಿಂದ ಕೆಲಸಮಾಡುತ್ತಿದ್ದಾರೆ ಎನ್ನುವುದು  ಅರ್ಥವಾಯಿತು.

ಹೌದು
ಪ್ರತಿದಿನ ಬೆಳಗಾದೊಡೆ,  ಒಬ್ಬ ಭಿಕ್ಷುಕ ತನ್ನ ತುತ್ತಿನ ಚೀಲ ತುಂಬಿಸಿಕೊಳ್ಳಲು ಭಿಕ್ಷೆ ಬೇಡಲು ಹೊರಡುತ್ತಾನೆ.
ಮೂಟೆ ಹೊರುವ ಕೂಲಿಯವನು ಕೂಲಿಗಾಗಿ ಕಾಯುತ್ತಾನೆ. ಪ್ರತಿಯೊಬ್ಬ  ಮಾನವ ಜೀವಿಯೂ  ತಮ್ಮ ಜೀವನ ಪೋಷಣೆಗಾಗಿ ಒಂದಲ್ಲ  ಒಂದು ಕಾಯಕ ಮಾಡಿಕೊಂಡು, ಭಿಕ್ಷೆಯನ್ನಾದರೂ ಮಾಡಿ
 (ಈ ಸೃಷ್ಠಿಯಲ್ಲಿ ಮಾನವ ಜೀವಿ ಒಂದನ್ನು ಬಿಟ್ಟು ಬೇರೆ ಯಾವುದೇ ಜೀವಿ ಭಿಕ್ಷೆ ಬೇಡಿ ಜೀವಿಸುವುದಿಲ್ಲ)  ಜೀವನ ಸಾಗಿಸುತ್ತಾ ಮುನ್ನೆಡೆಯುತ್ತಾರೆ.

 ಈ ಲೇಖನ ಓದಿದಾಗ ಭಿಕ್ಷುಕನಿಗೂ, ಕೂಲಿಯವನಿಗೂ, ಕಾಯಕ ಮಾಡುವ ವ್ಯಕ್ತಿಗೂ, ಮಾಧ್ಯಮಗಳಿಗೂ ಯಾವುದೇ ವ್ಯತ್ಯಾಸ ಕಾಣಿಸಲಿಲ್ಲ.

"ಪತ್ರಿಕೋದ್ಯಮ ಎಂಬುದು ನಮ್ಮ ದೇಶದ ಮೂರು ಅಂಗಗಳಾದ
1) ಶಾಸಕಾಂಗ
2) ಕಾರ್ಯಾಂಗ
3) ನ್ಯಾಯಾಂಗ    ಇವುಗಳಿಗಿಂತಲೂ ಹೆಚ್ಚಿನ ಜವಾಬ್ದಾರಿ ಹೊತ್ತಿರುವ ಸಂವಿಧಾನದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುವ ಅವಕಾಶ ಹೊಂದಿದೆ.

ಸಂವಿಧಾನದ ಮೂರು ಅಂಗಗಳು ತಪ್ಪು ಹಾದಿಯಲ್ಲಿ ಹೋಗುವಾಗ, ಅವುಗಳನ್ನು ಗುರುತಿಸಿ ಜನರಿಗೆ ತಿಳಿಸುವ ಮಹತ್ತರ ಜವಾಬ್ದಾರಿ "ಪತ್ರಿಕೋದ್ಯಮ"ಕ್ಕೆ  ಇದೆ.

ದೃಶ್ಯ ಮಾಧ್ಯಮಗಳು ಪ್ರಾರಂಭಕ್ಕೂ ಮುನ್ನ ವೃತ್ತ ಪತ್ರಿಕೆಗಳನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ಇತ್ತು.
ಆದರೆ  ದೃಶ್ಯ ಮಾಧ್ಯಮಗಳು ಮುಖ್ಯವಾಗಿ "ಸುದ್ಧಿ ವಾಹಿನಿ"ಒಂದೊಂದಾಗಿ ಪೂರ್ಣ ಪ್ರಮಾಣದಲ್ಲಿ  ಹೊರ ಹೊಮ್ಮಿದಾಗ, 
ಜನರಿಗೆ ಸೆಕೆಂಡುಗಳಲ್ಲಿ ಸುದ್ಧಿಗಳು ತಲುಪುವಲ್ಲಿ ಕ್ರಾಂತಿ ಹೆಜ್ಜೆಯನ್ನಿಡಲು ಪ್ರಾರಂಭಿಸಿದವು.

2007ರಲ್ಲಿ ಟಿವಿ-9 ಕರ್ನಾಟಕದಲ್ಲಿ ಪ್ರಾರಂಭವಾದಾಗ ಜನರಲ್ಲಿ ಭರವಸೆ ಮೂಡಲು ಪ್ರಾರಂಭವಾಯಿತು. ಯಾವ ಜನರು ಉದಯ,  ಈ ಟಿವಿ. (ಕಾವೇರಿ, ಸುಪ್ರಭಾತ) ಇಂತಹ ಮನರಂಜನಾ ಕಾರ್ಯಕ್ರಮಗಳನ್ನು ಮಾತ್ರವೇ ನೋಡುತ್ತಿದ್ದವರು, ಸುದ್ಧಿ ವಾಹಿನಿಯನ್ನು ನೋಡುವಲ್ಲಿ ನಿರತರಾದರು.
ಆ ನಿಟ್ಟಿನಲ್ಲಿ ಟಿವಿ-9 ಯಶಸ್ವಿಯೂ ಆಯಿತು.
ಆನಂತರ ಸುವರ್ಣ ನ್ಯೂಸ್ (ಸುವರ್ಣ 24 x 7) ಸಮಯ 24 x 7 (ಸಮಯ), ಜನಶ್ರೀ, ಕಸ್ತೂರಿ 24  x 7, ಪಬ್ಲಿಕ್ ಟಿವಿ ಹೀಗೇ ಒಂದೊಂದೇ ಜನ್ಮತಾಳುತ್ತಾ ಬಂವು. ನಂತರ ಬಂದ  ಬಹುತೇಕ   ವಾಹಿನಿಗಳು ಟಿವಿ-9ನನ್ನೇ ಅನುಕರಣೆ ಮಾಡುತ್ತಾ ಬಂದವು.

ಟಿವಿ-9 "ಹೀಗೂ ಉಂಟೆ" ಎಂಬ ಕಾರ್ಯಕ್ರಮವು ಆರಂಭದಿಂದಲೂ ಇವತ್ತಿನವರೆಗೂ ಪ್ರಸಾರವಾಗುತ್ತಿದೆ.
ಈ ಕಾರ್ಯಕ್ರಮದಿಂದ ಯಾರಿಗೆ ಒಳ್ಳೇಯದಾಗುತ್ತೋ ಗೊತ್ತಿಲ್ಲ. ಇದರಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳೋ ಗೊತ್ತಿಲ್ಲ 
(ನನ್ನ ಅನುಭವದ ಪ್ರಕಾರ ಮೌಢ್ಯವನ್ನು ಜನರು ತುಂಬಿಕೊಳ್ಳುತ್ತಾ ತಮ್ಮ ಕಷ್ಟಗಳನ್ನು ಬಗೆಹರಿಸಿಕೊಳ್ಳಲು ಆ ಸ್ಥಳಕ್ಕೆ ಹೋದಾಗ ನಿರಾಸೆಯೇ ಹೆಚ್ಚು) ಈ ಕಾರ್ಯಕ್ರಮದ ನಕಲನ್ನು ಬಹುತೇಕ ಎಲ್ಲಾ ವಾಹಿನಿಗಳೂ ಮಾಡಿಬಿಟ್ಟವು. 
ಇದು ಉದಾಹರಣೆ ಅಷ್ಟೇ.

ಅಂದರೆ ನಮ್ಮ ವಾಹಿನಿಗಳು  ಸಾಮಾಜಿಕ ಜವಾಬ್ದಾರಿ ಎಂಬ ಪದಕ್ಕೆ ಅರ್ಥವನ್ನು ಮರೆತುಬಿಟ್ಟಿವೆಯೇ?

ಅಜಿತರವರೇ,
ಆತ್ಮಸಾಕ್ಷಿಯಾಗಿ ಹೇಳಿ, ಬರೀ ಟಿ. ಆರ್.ಪಿ.ಗಾಗಿ ಅಲ್ಲಿ ವಾಹಿನಿಯಲ್ಲಿ ಕೆಲಸ ಮಾಡುವ ನೌಕರರ ಸಂಬಳಕ್ಕಾಗಿ ವಾಹಿನಿಯ ಮುಖ್ಯಸ್ಥರ ಚೀಲ ತುಂಬಿಸುವ ಸಲುವಾಗಿ ಪ್ರತಿನಿತ್ಯ ಇಷ್ಟೆಲ್ಲಾ ನಾಟಕ ಮಾಡಿಕೊಂಡು ಜೀವಿಸಬೇಕಾ?

* ವಾಹಿನಿಯ ಟಿ. ಆರ್. ಪಿ. ರೇಟ್ ಹೆಚ್ಚಿಸಿಕೊಳ್ಳಲು, ಜನರನ್ನು ಮುಠ್ಠಾಳರನ್ನಾಗಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ.
ಹಾದಿ ಬೀದಿ ಗಿಳಿಶಾಸ್ತ್ರ, ವಾಸ್ತುಶಾಸ್ತ್ರ, ಜ್ಯೋತಿಷಿಗಳನ್ನು,  ಷೇರು ಮಾರುಕಟ್ಟೆಯ, ಹರಳು ಮಾರುವವರನ್ನು ಎಳೆತಂದು ನಿಮ್ಮ ವಾಹಿನಿಗಳಲ್ಲಿ ಕೂರಿಸಿಕೊಂಡು, ಅವರ ಫೋನ್ ನಂಬರ್ ಗಳನ್ನು ವಿಳಾಸಗಳನ್ನು ಜನರಿಗೆ ಕೊಟ್ಟು ಅವರಿಗೆ ರೊಕ್ಕದ ಸುರಿಮಳೆ ತೋಯ್ಸಲು,  ಅವರಿಂದ ವಾಹಿನಿಗೆ ಧನ ಸಹಾಯವೇನೋ ಆಗಬಹುದೇನೋ,
ಆದರೆ ಸಾಮಾನ್ಯ ಜನರಿಗೆ ಎಷ್ಟು ತೊಂದರೆ  ಯಾಗುತ್ತೆ ಅಂತ  ಒಮ್ಮೆಯಾದರೂ ಆಲೋಚಿಸಿದ್ದೀರಾ?
ಜನರು ಒಂದಲ್ಲ  ಒಂದು ತೊಂದರೆಯಲ್ಲಿರುತ್ತಾರೆ. ಅವರಿಗೆ ಯಾವುದಾದರೂ ರೀತಿಯಲ್ಲಿ ಸಮಸ್ಯೆ ಬಗೆಹರಿಯಬೇಕು ನೀವು ತೋರಿಸುವ "ಹೀಗೂ ಉಂಟೆ" ಕಾರ್ಯಕ್ರಮವನ್ನು ನೋಡಿದ ತಕ್ಷಣ ಸಾಲ ಸೋಲ ಮಾಡಿ ನೂರಾರು ಕಿ. ಮೀ. ಹೋಗಿ ಬರುತ್ತಾರೆ. ಅಲ್ಲಿಗೆ ಹೋದಾಗ  ನಿರಾಸೆ ಕಟ್ಟಿಟ್ಟ ಬುತ್ತಿ  ಇಂತಹ ಅನುಭವಗಳು ಬಹಳಷ್ಟು ನಡೆಯುತ್ತಿವೆ.

ವಾಸ್ತು ಶಾಸ್ತ್ರದ ಕಾರ್ಯಕ್ರಮದಿಂದ ತಮ್ಮ ಸಮಸ್ಯೆಗಳಿಗೆ ತಮ್ಮ ಮನೆಗಳ  ಮೇಲೆ ವಕ್ರ ದೃಷ್ಠಿ ಬೀರಿ, ಚೆನ್ನಾಗಿದ್ದ ಮನೆಯ ವಾಸ್ತುವನ್ನು ಬದಲಾಯಿಸಲು ನಿಲ್ಲುತ್ತಾನೆ. ಇನ್ಯಾವುದೋ ಜ್ಯೋತಿಷಿ ಜಾತಕದಲ್ಲಿ ದೋಷವಿದೆ ಎಂದು ಹೇಳಿರುತ್ತಾನೆ. ಅವನ ದೂರವಾಣಿಗೆ ಕರೆ ಮಾಡಿ ಅವರಲ್ಲಿಗೆ ಹೋಗಿ ಅವರ ಚೀಲ ತುಂಬಿಸಿ ಬರುತ್ತಾರೆ.


ಮನೆ ಮಂದಿ ಕುಳಿತು  ವಾಹಿನಿಗಳನ್ನು  ನೋಡುತ್ತಾರೆ. ಆದರೆ ನೀವುಗಳು ಪ್ರಸಾರ ಮಾಡುವ ಕಾರ್ಯಕ್ರಮಗಳು ಎಂತವು.
"ಅರೆಬರೆ ನಗ್ನ ಚಿತ್ರಗಳನ್ನೊಳಗೊಂಡ ಮದನಾರಿಯಂತಹ ಕಾರ್ಯಕ್ರಮಗಳು, ಅಶ್ಲೀಲ ವಿಡಿಯೋ ಎಂ.ಎಂ.ಎಸ್. ಗಳು" ಇವುಗಳು ಜಗತ್ತಿನ famous Porn star ಯಾರೆಂಬುದನ್ನು  "ಪಡ್ಡೆಗಳ ನಿದ್ದೆ ಕೆಡಿಸಿದ ಸನ್ನಿ ಲಿಯೋನ್" ಎಂಬ ವಿಶೇಷ ಸಂಚಿಕೆಯೊಂದಿಗೆ  ಅವಳ ಬೆತ್ತಲೆ ಫೋಟೋ ಭಂಗಿಗಳನ್ನು ತೋರಿಸಿ, ನಿಮ್ಮ ಅರ್ಧ ಘಂಟೆ ಕಳೆದುಕೊಳ್ಳುತ್ತೀರಿ.  ನಿಮಗೇನೋ ಟಿ. ಆರ್. ಪಿ. ರೇಟಿಂಗ್ ತಂದುಕೊಡುತ್ತದೆ. ನಿಜ. ಆದರೆ ವೀಕ್ಷಕರ ಕಥೆ ?
ನೀವೇ ಹೇಳುವ ಪಡ್ಡೆಗಳು ಇಂಟರ್ ನೆಟ್ ನಲ್ಲಿ  ನಿಮ್ಮ ವಾಹಿನಿಯಲ್ಲಿ ತೋರಿಸುವ ವೆಬ್ ಸೈಟ್ ಗಳ ವಿವರಗಳನ್ನು ಸುಲಭವಾಗಿ ತಿಳಿದುಕೊಂಡು ಹೋಗಿ ನೋಡಲು ಅಣಿಯಾಗುತ್ತಾರೆ.

ಕೆಲವು ಚಿತ್ರಮಂದಿರಗಳಲ್ಲಿ  ಕದ್ದುಮುಚ್ಚಿ ಸೆಕ್ಸ್ ಬಿಟ್ ಗಳನ್ನು ತೋರಿಸಿ ಹಣ ಮಾಡಿಕೊಳ್ಳುತ್ತಿರುವವರಿಗೂ, 
ವಾಹಿನಿಗಳಿಗೂ ಇರುವ ವ್ಯತ್ಯಾಸಗಳಾದರೂ ಏನು?\ ಯಾರನ್ನು ನಂಬುವುದು?



ಹಿಡನ್ ಕ್ಯಾಮರಾಗಳನ್ನು ಬಳಸಿಕೊಂಡು, ನಗರ  ಪ್ರದೇಶಗಳಲ್ಲಿ ವೇಶ್ಯಾವಾಟಿಕೆ ನಡೆಯುವುದನ್ನು ಸೆರೆಹಿಡಿದು ಜನರಿಗೆ ತೋರಿಸಿ,  ಎಲ್ಲೆಲ್ಲಿ ಯಾವ ಕಡೆ ನಡೆಯುತ್ತವೆ ಎಂಬುದನ್ನು ತೋರಿಸಿಕೊಡುತ್ತೀರಿ. ಆದರೆ ಆ ದಂಧೆ ಶಾಶ್ವತವಾಗಿ ನಿಂತಿದೆಯಾ? ನಿಲ್ಲಿಸುವ ಪ್ರಯತ್ನವನ್ನಾದರೂ ಮಾಡಿದ್ದೀರಾ ಎಂದರೆ ಅದೂ ಇಲ್ಲ. 
ಎಲ್ಲಿದೆ ನೈತಿಕತೆ ಸ್ವಾಮಿ, 
ರಾಜಕೀಯ ಚರ್ಚೆಯೆಂದರೆ ನಾಲ್ಕು ಪಕ್ಷಗಳ ರಾಜಕಾರಣಿಗಳು ಅವರ ನಡುವೆ ಅದೇ ರಾಗ, ಅದೇ ಹಾಡು,
ಬಿಗ್ ಫೈಟ್, ಬೆಂಕಿ ಬಿರುಗಾಳಿಯಂತಹ ಕಾರ್ಯಕ್ರಮಗಳಲ್ಲಿ ಯಾರನ್ನೂ ಪೂರ್ಣವಾಗಿ ಮಾತಾನಾಡಲು ಬಿಡೋದಿಲ್ಲ ತಾವುಗಳೂ ಮಾತಾಡೊಲ್ಲ. ಎಲ್ಲವೂ ಆತುರಾತುರ ಕೊನೆಗೆ ಆ ಸಂಚಿಕೆ ಮುಕ್ತಾಯ.

* ಒಬ್ಬ ಎಡಬಿಡಂಗಿ ಕಾಳಿಸ್ವಾಮಿಯನ್ನು ಫೇಮಸ್ ಮಾಡಿದ್ದೇ ನಿಮ್ಮ ಮಾಧ್ಯಮಗಳು, ಆ ಕಪಿ  ಇದನ್ನೇ ನಂಬಿಕೊಂಡು ಏನೋ ಮಾಡಲು ಹೋಗಿ ಇಂಗು ತಿಂದ ಮಂಗನಾಗಿ, ಕೊನೆಗೆ ಸುವರ್ಣ ವಾಹಿನಿಯಲ್ಲೇ ಜನರಿಗೂ, ನಿಮಗೂ ಚಳ್ಳೇಹಣ್ಣು ತಿನ್ನಿಸಿ ತನ್ನ ಆಶ್ರಮದ ಆಸ್ತಿಯ ಜವಾಬ್ದಾರಿಯನ್ನು ತನ್ನ ಹೆಂಡತಿಗೆ ಕೊಟ್ಟು ಗೆದ್ದವನನ್ನು ನೋಡಿ ಬೆಪ್ಪಾದವರು ನೀವೇ ತಾನೇ?

* ನಿತ್ಯಾನಂದನ ವಿರುದ್ಧ ಆರತಿ ಪರ ದಿನಗಟ್ಟಲೇ ಕೊರೆದ್ರಿ. * ಮತ್ತೊಂದು ವಾಹಿನಿ ಆರತಿ ವಿರುದ್ಧ ಕೊರೆಯಿತು.
ಇದರಿಂದ ಲಾಭ ಯಾರಿಗೆ ?

* ಭೀಮಾ ತೀರದಲ್ಲಿ" ಚಿತ್ರದ ಬಗ್ಗೆ ಅದೆಷ್ಟು ಗಂಟೆಗಳನ್ನು ತಿಂದಿರಿ.
ಪತ್ರಿಕೆ ನಡೆಸುವವರು ಕೋಟಿಗಟ್ಟಲೇ ಆಸ್ತಿ ಮಾಡಿ ಘೋಷಿಸಿಕೊಳ್ಳುತ್ತಾರೆ. ತನ್ನದೇ ಆಪ್ತ ಮಿತ್ರರಾಗಿದ್ದವರ ವಿರುದ್ಧ ಪುಟಗಟ್ಟಲೇ ಹೀನಾಮಾನವಾಗಿ ಕೆಟ್ಟಪದಗಳನ್ನು ಬಳಸಿ ಹೀಯಾಳಿಸುತ್ತಾರೆ. ಅವರು ಇವರ ಮೇಲೆ ಇವರು ಅವರ ಮೇಲೆ ತುಚ್ಛವಾಗಿ ಬೈದಾಡಿಕೊಳ್ಳುತ್ತಾರೆ. ಈ ಮಟ್ಟಕ್ಕೆ ಇಳಿದಿದೆ. ಮಾಧ್ಯಮಲೋಕ.

* ದುನಿಯಾ ವಿಜಿಯ ಪರ ನಿಂತು ದಿನಗಟ್ಟಲೇ ನೀವೇ ಕಾರ್ಯಕ್ರಮ ನಡೆಸಿಕೊಡುತ್ತೀರಿ.
* ನಾಗರತ್ನರ ಪರ ನಿಂತು ಪಬ್ಲಿಕ್ ಟಿವಿಯಲ್ಲಿ ಕಾರ್ಯಕ್ರಮ ದಿನವಿಡಿ ಮೂಡಿಬರುತ್ತೆ.

ಒಬ್ಬರ ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ. ನಿಮ್ಮಲ್ಲಿ ಪ್ರಸಾರವಾಗೋ ಸುದ್ಧಿಗಳನ್ನು ಹೇಗೆ ನಂಬೋದು?

ವಕೀಲರ ಗಲಾಟೆಯಲ್ಲಿ "ಒಬ್ಬ ಪೇದೆ ಸತ್ತೇ ಹೋದ" ಅಂತ breaking news ಕೊಡ್ತೀರಿ ಇಂತ ಸುಳ್ ಸುದ್ಧಿಗಳಾಕೆ?

* ಸುವರ್ಣವನ್ನು ಕನ್ನಡಮಯ ಮಾಡ್ತೇನೆ ಅಂತ ಹೊರಟ ವಿಶ್ವೇಶ್ವರ ಭಟ್ ರಿಗೆ ಕನ್ನಡವೇ ಬೇಸರವಾಯಿತು. 
ಈಗ ಎಲ್ಲವೂ ಇಂಗ್ಲೀಷ್ ಮಯವಾಗಿದೆ.

ಹೋಗಲಿ :ಪ್ರತಿನಿತ್ಯ ಕನ್ನಡ ಕಾಗುಣಿತಗಳನ್ನು ಕೊಲ್ಲುತ್ತಿದ್ದೀರಲ್ಲ (ಇಂದಿಗೂ ಜಾಹೀರಾತೊಂದರಲ್ಲಿ "ಫಲಿಂತಾಶ"ದ ಬದಲು "ಫಲಿಂತಾಂಶ" ಅಂತಲೇ ಬರುತ್ತಿದೆ. ಕನ್ನಡ ಕಾಗುಣಿತಗಳ ತಪ್ಪುಗಳು
ಇದನ್ನೇಲ್ಲಾ ತಡೆಯೋದ್ರಿಂದ  ನಿಮ್ಮ  "ಟಿ. ಆರ್.ಪಿ." ರೇಟ್ ಕಡಿಮೇಯೇನಾದ್ರು ಆಗುತ್ತಾ?  

ಈ ದೇಶದಲ್ಲಿ ಎಲ್ಲಾ ಕ್ಷೇತ್ರಗಳೂ ಭ್ರಷ್ಟಚಾರದಿಂದ ಮೌಲ್ಯಗಳನ್ನು ಕಳೆದುಕೊಂಡು ದಿಕ್ಕಾಪಾಲಾಗಿ ದೇಶವನ್ನೇ ಅತಂತ್ರವನ್ನಾಗಿಲು ಹೊರಟಿರುವಾಗ,  ಪತ್ರಿಕೋದ್ಯಮದಿಂದ  ಈ ದೇಶಕ್ಕೆ ಒಳ್ಳೇಯದಾಗಬಹುದೇನೋ ಎಂಬ ತುಸು ಆಶಾಭಾವನೆ ಹೊಂದಿರುವವರಿಗೆ "ಕೇವಲ ಟಿ. ಆರ್.ಪಿ"ಗಾಗಿಯೇ ತುತ್ತಿನ ಚೀಲ ತುಂಬಿಸಿಕೊಳ್ಳುವ ಮಾರ್ಗದಲ್ಲಿಯೇ ಹೊರಟಿರುವುದು ನಿಜಕ್ಕೂ ಅಸಹ್ಯ ಎನಿಸುತ್ತಿದೆ. 

ಭ್ರಷ್ಟ ಜವಾನನಿಗೂ, ಭ್ರಷ್ಟ ಅಧಿಕಾರಿಗಳಿಗೂ,  ಭ್ರಷ್ಟ ರಾಜಕಾರಣಿಗಳಿಗೂ, ಅನಾಚಾರ ಮಾಡಿ ಜೀವಿಸುವವರಿಗೂ,
ಟಿ. ಆರ್. ಪಿ. ಹಿಂದೆ ಬಿದ್ದಿರುವ ಮಾಧ್ಯಮಗಳಿಗೂ ಯಾವ ವ್ಯತ್ಯಾಸಗಳೂ ಇಲ್ಲ. 

ಎರಡು ಮದುವೆಯಾದವನ್ನು ಮೂರನೇ ಮದುವೆಯಾಗುತ್ತಾನೆ ಎಂಬ ಸುದ್ಧಿ ಬೆನ್ನೇರಿ  ಸ್ವ ಘೋಷಿತ ಸಂಘಟನೆಗಳ ಜೊತೆ ಕೂಡಿ, ಹಾದಿ ರಂಪ ಬೀದಿ ರಂಪ ಮಾಡುವ ಮಾಧ್ಯಮಗಳಿಗೆ,  ನಮ್ಮ ರಾಜ್ಯವನ್ನಾಳಿದ ಮುಖ್ಯಮಂತ್ರಿಯವರ ಅನಧಿಕೃತ ಎರಡನೇ ಮದುವೆ   ಬಹಿರಂಗವಾದಾಗಲೂ ಸಂಬಂಧಪಟ್ಟವರನ್ನೂ ಒಂದೂ ಮಾತನ್ನೂ ಕೇಳಿ ಸ್ಪಷ್ಟನೆ  ಪಡೆದುಕೊಳ್ಳುವ ಬದಲು, ಅದೇ ಮಹಾರಾಣಿಯ ಜೊತೆ ಅನುಭವಿ ಪತ್ರಕರ್ತರು ಅವರ ಸಂಬಂಧದ ಬಗ್ಗೆ ಹರಟುತ್ತಾರೆ. ಅದನ್ನೇ "ವಿಶೇಷ ಸುದ್ಧಿ"ಯನ್ನಾಗಿ ಮಾಡಿ ಅಕ್ರಮವನ್ನು ಸಕ್ರಮ ಮಾಡಲು ಪುರೋಹಿತ್ಯ ವಹಿಸುವಂತಹ ಕೆಲಸಕ್ಕೆ ಏನನ್ನ ಬೇಕು? ಯಾಕೆ  ಅವರು ಮನುಷ್ಯರಲ್ಲವೇ? ಅವರನ್ನು ಕೇಳುವ ಧೈರ್ಯಯಾಕಿಲ್ಲ ? 
ಇದರಿಂದ  ಟಿ. ಆರ್. ಪಿಗೇನಾದರೂ ಕುತ್ತು ಬರುತ್ತದೆಯೇ?

ಸಾಮಾನ್ಯ ಜನರ ತಪ್ಪುಗಳನ್ನು ದೊಡ್ಡದಾಗಿಸಿ, ನಡೆಯುತ್ತಿರುವ ಮದುವೆಗಳಲ್ಲಿ ತಲೆ ದೋರುವ ಸಣ್ಣ ಪುಟ್ಟ ಜಗಳಗಳನ್ನು LIVE" ಆಗಿ ತೋರಿಸಿ , ತೋರಿಸಿ, ಆ ಮದುವೆ ಶಾಶ್ವತವಾಗಿ ನಿಂತು ಹೋಗುವ ಹಾಗೆ ಮಾಡುವ ಹೆಗ್ಗಳಿಕೆ ಮಾಧ್ಯಮಗಳದ್ದು ಅಲ್ಲವೇ?   ಇಂತಹುಗಳಿಂದ TRP  ಹೆಚ್ಚಾಗುತ್ತದೆ ನಿಜ ಕುತೂಹಲ ನೀಡಿ, ಗಂಟೆ, ಎರಡು, ಮೂರು ಹೀಗೇ ದಿನದ 24 ಗಂಟೆಗಳನ್ನು ಒಂದೇ ವಿಷಯಕ್ಕೆ ಎಳೆದು ಎಳೆದೂ ಸಮಯವನ್ನು ಬಲಿ ತೆಗೆದುಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆಯೇ?

ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕಾದ ಮಾಧ್ಯಮಗಳು, ಸಮಾಜ ಕಂಟಕಗಳಾಗಿ ಪರಿವರ್ತಿತವಾಗುತ್ತಿದೆ.
ನಮಗೆ  ಜೀವನ ಮಾಡಲು TRP ಎಂಬ ಆಮ್ಲಜನಕ ಬೇಕೇ ಬೇಕು ಎಂದು ಹೇಳಿ, ಇಲ್ಲದಿದ್ದರೆ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಎಂಬ ಮಾತುಗಳನ್ನು ಕೇಳಿದಾಗ,
 ಬಹುತೇಕ ಪೂರ್ಣ ಪ್ರಮಾಣದ ವಿದ್ಯಾವಂತರೇ ತುಂಬಿರುವ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವ  ನಮ್ಮ ವಿದ್ಯಾವಂತ ಯುವಕರು ತಮ್ಮ ಹೊಟ್ಟೆಪಾಡಿಗಾಗಿ,  ತಮ್ಮ  ಸಂಸಾರ ಸಾಗಿಸುವುದಕ್ಕಾಗಿ, 
ಸುಳ್ಳನ್ನು ಸತ್ಯವನ್ನಾಗಿಸಿ, ಜನರನ್ನು ಹಾದಿ ತಪ್ಪಿಸಿ, ತಮ್ಮ ದೊರೆಯ ಖಜಾನೆ ತುಂಬಿಸುವ ಕೆಲಸಕ್ಕೆ,
ತಮ್ಮ ಆತ್ಮಸಾಕ್ಷಿಗಳನ್ನೇ ಬಲಿಕೊಟ್ಟು , ತಮ್ಮ ಮೌಲ್ಯಗಳನ್ನು ಹರಾಜಿಗಿಟ್ಟು ಕರ್ತವ್ಯ ನಿರ್ವಹಿಸುತ್ತಿರುವುದು  ನಮ್ಮ ದೇಶದ ಪರಿಸ್ಥಿತಿ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ತಮ್ಮ ವಿದ್ಯಾರ್ಹತೆ, ಅನುಭವಗಳನ್ನು ಈ ದೇಶಕ್ಕೆ  ನೀಡಿ ಈ ದೇಶದ  ಉನ್ನತಿಗೆ ತಮ್ಮ ಪಾಲನ್ನೂ ನೀಡುವುದರ ಬದಲು,  ಪ್ರತಿನಿತ್ಯ ನಾಟಕೀಯವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ, 
ದಿನಗಳನ್ನು ದೂಡುತ್ತಿರುವುದು ಪ್ರಬುದ್ಧ ಭಾರತೀಯ ವಿದ್ಯಾವಂತರ ಕರ್ತವ್ಯವೇ?

ಭಾರತ ದೇಶದಲ್ಲಿ  ಅದೇಷ್ಟೋ ಮಂದಿ ಒಪ್ಪತ್ತು ಉಂಡು ಜೀವಿಸುತ್ತಿಲ್ಲವೇ?
ಅವರಿಗಿಂತಲೂ ಕಡೆಯಾಗಿ ಹೋಗಿಬಿಟ್ಟರಾ ನಮ್ಮ ವಿದ್ಯಾವಂತರು.

ರವಿಬೆಳೆಗೆರೆಯಂತಹ ಹಿರಿಯ ಅನುಭವಿ ಪತ್ರಕರ್ತರು ಪತ್ರಿಕೋದ್ಯಮದ ಮೂಲಕವೇ ಕೀರ್ತಿ ಗಳಿಸಿದವರು
ಅವರೇ ಹೇಳುವ ಹಾಗೇ "ಒಂದು ಸುದ್ದಿ ವಾಹಿನಿ" ಮಾಡುವುದು ಕಷ್ಟದ ಕೆಲಸವಲ್ಲ.  ಯಾರಿಗೆ ಬೇಕು ದೃಶ್ಯ ಮಾಧ್ಯಮದ  ಉಸಾಬರಿ ಎನ್ನುವಂತೆ ಹೇಳುತ್ತಾರೆ .  ಈಗಿರುವ ವಾಹಿನಿಗಳ ಮೇಲೆ ಅಷ್ಟೂ ಬೇಸರ ಉಂಟಾಗಿದ್ದರೆ ತಾವೇ ಒಂದು ವಾಹಿನಿ ಮಾಡಿ ಮುನ್ನಡೆಸಬಹುದು. ನನಗ್ಯಾಕೆ ? ಅನ್ನೋದನ್ನು ಬಿಡಬೇಕು. ಪತ್ರಿಕೋದ್ಯಮದಿಂದಲೇ ಎಲ್ಲವನ್ನು ಪಡೆದವರು ಅದೇ ಪತ್ರಿಕೋದ್ಯಮದ ಮೂಲಕ ಜನರಿಗೆ ಅನುಕೂಲವಾಗುವಂತಹ ಕೆಲಸಗಳಿಗೆ ಮಾರ್ಗದರ್ಶಕರಾಗುವುದು ಸೂಕ್ತವಲ್ಲವೇ?

ನೂರಾರು ಕೋಟಿ ಬಂಡವಾಳ ಹಾಕಿದವರನ್ನು ಸಮಾಧಾನ ಪಡಿಸಲು,  ಜಾಹೀರಾತುದಾರರನ್ನು ಓಲೈಸಿ,
 ತಮ್ಮ ಸಂಬಳದ ಮೂಲಕ್ಕೆ ಇಷ್ಟೆಲ್ಲಾ ಸರ್ಕಸ್ ಮಾಡಬೇಕಾ? 
ಬಿಟ್ಟು ಬಿಡುವುದು ಒಳಿತು, ಆತ್ಮಸಾಕ್ಷಿಯಾಗಿ. ಮನಸ್ಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡುವುದಕ್ಕಿಂತ 
ಶಾಶ್ವತವಾಗಿ ವಾಹಿನಿಗಳನ್ನು ಮುಚ್ಚಿಬಿಡುವುದು ಸೂಕ್ತ ಅನ್ನಿಸುತ್ತೆ.

ಈ ರಾಜ್ಯದಲ್ಲಿ  ಮಧ್ಯಮ ವರ್ಗದವರು, ಬಡ ಜನರು ಪ್ರತಿನಿತ್ಯ ನೂರಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಶಾಸಕಾಂಗ, ಕಾರ್ಯಾಂಗ ಅಧಿಕಾರ ವರ್ಗಗಳು, ರಾಜಕಾರಣಿಗಳು, ಈ ದೇಶದ ಸಂಪತ್ತನ್ನು, ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದಾರೆ.  ದೂರದ ದೆಹಲಿಯಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಹೋರಾಡುವುದನ್ನು ಗಮನಿಸುವ ನೀವುಗಳು ನಿಮ್ಮ ಪ್ರಬಲ "ಪತ್ರಿಕೋದ್ಯಮ ಅಸ್ತ್ರ"ವನ್ನು   ಬಳಸಿ, ಇಲಾಖೆಗಳಲ್ಲಿ ನಡೆಯುವ ಅವ್ಯವಹಾರಗಳನ್ನು ಭ್ರಷ್ಟ ರಾಜಕಾರಣಿಗಳ ಅಕ್ರಮ ಆಸ್ತಿಗಳನ್ನು RTI ಮೂಲಕ ಬಯಲಿಗೆಳೆದು ಪ್ರಾಮಾಣಿಕವಾಗಿ ಈ ಭಾರತದ ಪ್ರಜೆಯಾಗಿ ಕರ್ತವ್ಯ ನಿರ್ವಹಿಸಬಾರದೇಕೆ? 

ಈ ಯೋಚನೆ ನಮ್ಮ ಅಜಿತ್ ಹನಮಕ್ಕನವರಂತಹ  ಯುವ ಪತ್ರಕರ್ತರ ಪಡೆಯೊಂದು ತಯಾರಾಗಿ ಮೆಟ್ಟಿನಿಂತರೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸಿ ತೋರಿಸಿದಾಗ ಅದರ ಪ್ರತಿಫಲ ಶಾಶ್ವತವಾಗಿ ನಿಲ್ಲುತ್ತದೆ. 


ಕೊನೆಯದಾಗಿ ಗುಲ್ಭರ್ಗದಿಂದ ಅವಿನಾಶ್ ಎಂಬ ಮಿತ್ರ  ಸುವರ್ಣವಾಹಿನಿಯ ಅಜಿತ್ ಹನಮಕ್ಕನವರ್ ರವರ ಪೋನ್ ಹುಡುಕಿ ತನ್ನ ಹಣ ಖರ್ಚು ಮಾಡಿ ಫೋನ್ ಮಾಡಿ,

"¤ÃªÀÅ ¸ÀĪÀtð £ÀÆå¸ï£ÀªÀgÀÄ gÀZÀ£ÁvÀäPÀ PÁAiÀÄðPÀæªÀÄUÀ¼À£ÀÄß ªÀiÁqÀ¨ÉÃPÀÄ ¸Ágï, n.Dgï.¦UÁV PÁAiÀÄðPÀæªÀÄ ªÀiÁqÀ¨ÉÃr" C£ÉÆßà ¹zÀÞ¨sÁµÀt NzÀvÉÆqÀಗುವ ಆತನಿಗೆ ನಿಮ್ಮ ಮೇಲೆ ಅದೆಷ್ಟು ನಂಬಿಕೆ ಇರಬೇಕು ಗಮನಿಸಿದ್ದೀರಾ?  

ಅವಿನಾಶ್ ನಂತಹವರು, ನನ್ನಂತಹ ಕೋಟಿ ಜನರು ನಿಮ್ಮಂತಹ ಮಾಧ್ಯಮ ಮಿತ್ರರಿಂದ  ಈ ರಾಜ್ಯಕ್ಕೆ ಒಳ್ಳೇಯದಾಗುತ್ತೆ ಎಂಬಶಾಭಾವನೆಯಿಂದಲೇ ಫೋನ್ ಮಾಡಿದ್ದಾರೆ..

ನನ್ನಂತಹ ಅರೆ ಹುಚ್ಚರು  "ಫೇಸ್ ಬುಕ್ಕಿ"ನಲ್ಲಿ ಬರೆದುಕೊಳ್ಳುತ್ತೇವೆ
ಇಲ್ಲಿ ಇಬ್ಬರಿಗೂ ಇರುವುದೊಂದೇ ಕಾಳಜಿ
ನಮ್ಮ ರಾಜ್ಯವನ್ನು ದೇಶವನ್ನು ರಕ್ಷಿಸೋದು ಹೇಗೆ? ಎಂಬುದು ?


ನಿಮ್ಮ ಲೇಖನದ ಕೊನೆಯಲ್ಲಿ ಬರೆದ 
EµÉÖ¯Áè ºÉýzÀ £ÀAvÀgÀ PÀÆqÀ, ¥Àæw ZÁ£É¯ï£À°è n.Dgï.¦ ¯ÉPÁÌZÁgÀUÀ¼À£Àß §¢VlÄÖ MAzÀµÀÄÖ gÀZÀ£ÁvÀäPÀ PÁAiÀÄðPÀæªÀÄUÀ¼ÀÄ §gÀ¨ÉÃPÀÄ C£ÉÆßÃzÀgÀ°è JgÀqÀÄ ªÀiÁw®è. CAxÀ PÁAiÀÄðPÀæªÀÄUÀ¼À §UÉÎ £Á®ÄÌ d£À M¼ÉîAiÀÄ ªÀiÁvÁzÀgÀÆ DrzÀgÉ ªÀiÁqÀĪÀªÀjUÉ GvÁìºÀ §A¢ÃvÉãÉÆÃ. 
ಈ ಸಾಲುಗಳ ಬಗ್ಗೆ ಹತ್ತು ಸಾರಿ ಯೋಚಿಸಿ, ಸೂಕ್ತ ನಿರ್ಧಾರ ಮಾಡಿದರೆ
ಅಸಾಧ್ಯವಾದುದು ಯಾವುದೂ ಇಲ್ಲ.   

ªÀiÁzsÀåªÀÄUÀ¼À dªÁ¨ÁÝj £É£À¦¸ÀĪÀªÀjUÉÆAzÀÄ ªÀiÁತಿಗೆ ನನಗನ್ನಿಸಿದ್ದನ್ನು ಬರೆದುಕೊಂಡಿದ್ದೇನೆ. ಜವಾಬ್ದಾರಿಯನ್ನು ನೆನಪಿಸುತ್ತಿಲ್ಲ. ನಿಮ್ಮ ಪ್ರಾಮಾಣಿಕ ಕರ್ತವ್ಯದಿಂದ  ಈ ರಾಜ್ಯದ ಜನರಿಗೆ ಒಳ್ಳೆಯದಾಗುತ್ತೇನೋ ಎಂಬ ಆಶಾಭಾವನೆ ಮಾತ್ರ.

ರಾಜು ವಿನಯ್ ದಾವಣಗೆರೆ
rajudavanagere@gmail.com

 









2 comments:

  1. ಅಜಿತ್ ಬರೆದ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ ಸೂಕ್ತವೂ,ಸಮಂಜಸವೂ ಆಗಿದೆ. ಈ ಪ್ರತಿಕ್ರಿಯೆಯನ್ನು "ಕನ್ನಡಪ್ರಭ"ಕ್ಕೆ ಕಳಿಸಿ. ಏನ್ ಬರೆದ್ರೂ ಪ್ರಕಟಿಸ್ತೀವಿ ಅನ್ನೋ ಇವರು ಇದನ್ನು ಪ್ರಕಟಿಸ್ತಾರಾ ನೋಡೋಣ

    ReplyDelete
  2. ನಿಮ್ಮ ಸವಾಲಿನ ಮಾತುಗಳು ಅತ್ಯಂತ ವಿಶೇಷವಾಗಿವೆ... ಇಲ್ಲೊಂದು ಸಾಮಾನ್ಯ ಪ್ರಶ್ನೆ ಸರಿಪಡಿಸುವವರಾರು...? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಇಲಿ ಹುಡುಕಬೇಕಿರುವುದೇ ನಮ್ಮ ದುರಂತ....!

    ReplyDelete